ಕದಂಬ.ಬಿಜ್ ಒಂದು ಅತ್ಯಂತ ವಿಶಿಷ್ಟವಾದ ಔದ್ಯಗಿಕ ಪರಿಕಲ್ಪನೆಯಾಗಿದ್ದು, ಇದರ ವೈವಿಧ್ಯಮಯ ಮತ್ತು ಬಹು ಆಯಾಮೀ ಸೇವಾ ಚಟುವಟಿಕೆಗಳು, ನಮ್ಮ ದೇಶದ ಬಹುದೂರದ ಹಳ್ಳಿಗಾಡಿನ ಪ್ರದೇಶಗಳಿಂದ ಹಿಡಿದು ಅಭಿವೃದ್ಧಿ ಹೊಂದಿದ ನಗರ ಪ್ರದೇಶಗಳಲ್ಲಿರುವ ಯುವ ಸಮುದಾಯಕ್ಕೂ ಸಹ ಸ್ವ- ಉದ್ಯೋಗ ಮತ್ತು ಹೆಚ್ಚುವರಿ ಆದಾಯದ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿ ಕೊಡುತ್ತಿದೆ .

ಕದಂಬ.ಬಿಜ್ ಅನ್ನುವುದು ಕದಂಬ ಸಮೂಹ ಸಂಸ್ಥೆಗಳು ಪ್ರಾರಂಭಿಸಿದ ವಿವಿಧ ಸಮಾಜಮುಖಿ ವಾಣಿಜ್ಯೋದ್ಯಮ ಉಪಕ್ರಮಗಳ ಪೈಕಿ ಒಂದಾಗಿದ್ದು ಸಮಾಜದ ಎಲ್ಲ ರಂಗಗಳಲ್ಲಿಯೂ ಸುಸ್ಥಿರವಾದ ಅಭಿವೃದ್ಧಿಯ ಸಂಕಲ್ಪದೊಂದಿಗೆ ತನ್ನ ಬಹು ಆಯಾಮೀ ಚಟುವಟಿಕೆಗಳಿಂದ ಸಂಸ್ಥೆಯ ಎಲ್ಲಾ ಪಾಲುದಾರರ ಮೌಲ್ಯ ವರ್ಧನೆಯ ಗುರಿಯನ್ನು ಹೊಂದಿದೆ

ಕಳೆದ 21 ವರ್ಷಗಳಿಂದ ಕದಂಬ ಸಮೂಹ ಸಂಸ್ಥೆಗಳು ಅನೇಕ ಸಂಶೋಧನೆ ಮತ್ತು ಉತ್ಪನ್ನಗಳ ಅಭಿವೃದ್ಧಿ, ಬ್ಯಾಂಕಿಂಗ್ ವ್ಯವಹಾರ, ವ್ಯಾಪಾರೋದ್ದಿಮೆ, ಸಲಹಾ ಸೇವೆಗಳಷ್ಟೇ ಅಲ್ಲದೆ ಇತರ ವಿವಿಧ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿದೆ.